ಇಬಾದಾನ್-
	ಆಫ್ರಿಕ ಖಂಡದ ಪಶ್ಚಿಮನೈಜೀರಿಯ ದೇಶದ ಓಯೋ ಪ್ರಾಂತ್ಯದ ಮುಖ್ಯ ಪಟ್ಟಣ. ನೈಜೀರಿಯದ ನೈಋತ್ಯ ಭಾಗದಲ್ಲಿದೆ. ಉತ್ತರ ಅಕ್ಷಾಂಶ 7(-25(, ಪೂರ್ವ ರೇಖಾಂಶ 4(. ಏಳು ಗುಡ್ಡಗಳ ಮೇಲೆ ನಿಂದಿದೆ. ಸರಾಸರಿ ಎತ್ತರ 748'. ಜನಸಂಖ್ಯೆ 6 ಲಕ್ಷ. ನೀಗ್ರೊ ಜನರ ಹೆಚ್ಚು ; ಅವರಲ್ಲಿ ಬಹುಮಂದಿ ಮುಸಲ್ಮಾನರು. 1948ರಲ್ಲಿ ಇಲ್ಲಿ ಒಂದು ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಲಾಯಿತು. ವಿದ್ಯಾಕ್ಷೇತ್ರದಲ್ಲಿ ಕ್ರೈಸ್ತರ ಪ್ರಭಾವ ಹೆಚ್ಚು. ಸುತ್ತ ಮುತ್ತ ಕೋಕೋ, ಹತ್ತಿ, ಜೋಳ, ನಿಂಬೆ, ನೇರಳೆ ಮುಂತಾದುವನ್ನು ಬೆಳೆಯುತ್ತಾರೆ. ಮುಖ್ಯ ಕಸಬು ವ್ಯವಸಾಯ. ವ್ಯಾಪಾರ. ಇದು ನೈಜೀರಿಯದ ಒಂದು ಮುಖ್ಯ ವ್ಯಾಪಾರ ಮತ್ತು ಕೈಗಾರಿಕಾಕೇಂದ್ರ. ಈ ಪಟ್ಟಣಕ್ಕೆ ಲಾಗೋಸ್‍ನಿಂದ ರೈಲುಮಾರ್ಗವಿದೆ. ಎರಡನೆಯ ಮಹಾಯುದ್ಧವಾದ ಮೇಲೆ ಇದು ಹೆಚ್ಚು ಪ್ರಗತಿ ಹೊಂದಿದೆ. 

(ಎಸ್.ಎನ್.ಎ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ